ಸಮೀಪದ ಹಳೆಬೆಳವನೂರು ಗ್ರಾಮದಲ್ಲಿ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ವಿವಿಧ ಕಾಮಗಾರಿಗಳಿಗೆ ನಿನ್ನೆ ಭೂಮಿ ಪೂಜೆ ನೆರವೇರಿಸಿದರು.
ಚಿತ್ರದಲ್ಲಿ ಸುದ್ದಿ

ಜೆ.ಡಿ.ಎಸ್ ತೊರೆದು ಬಿ.ಜೆ.ಪಿ. ಸೇರ್ಪಡೆ
ತಾಲ್ಲೂಕಿನ, ಆನಗೋಡು ಹೋಬಳಿ, ವಡ್ಡೇನಹಳ್ಳಿ ಗ್ರಾಮದ ಜೆ.ಡಿ.ಎಸ್. ಮುಖಂಡ ಕೆ.ಆರ್. ಶಿವಶಂಕರ್, ಕೆ. ಮರುಳಸಿದ್ದಪ್ಪ, ವಿ.ಎಸ್. ಜಯಪ್ರಕಾಶ್, ಇ.ವಿ. ಜಯದೇವ್, ಅವರುಗಳು ಜೆ.ಡಿ.ಎಸ್ ಪಕ್ಷ ತೊರೆದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು.

ಗೋವಿನಹಾಳು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪೋಷಕರ ಸಭೆ
ಮಲೇಬೆನ್ನೂರು : ಕೊರೊನಾ ಕಾರಣ ಸ್ಥಗಿತವಾಗಿದ್ದ ತರಗತಿಯನ್ನು ಸರ್ಕಾರದ ಆದೇಶದಂತೆ ಪ್ರಾರಂಭಿಸಿದ್ದು, ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಗುಚ್ಛ ಸಂಪನ್ಮೂಲ ವ್ಯಕ್ತಿ ಕೆ.ಆರ್ ಬಸವರಾಜಯ್ಯ ಕೋರಿದರು.

ಸೇಲಂ ಓಪನ್ ಕರಾಟೆ ಚಾಂಪಿಯನ್ ಶಿಪ್ : ನಿಧಿ ಬೇತೂರ್ ತೃತೀಯ
ಸೇಲಂ ಡಿಸ್ಟ್ರಿಕ್ಟ್ ಕರಾಟೆ ಅಸೋಸಿಯೇಷನ್, ಶಿಶೋಕೈ ಕರಾಟೆ ಅಕಾಡೆಮಿ ವತಿಯಿಂದ ತಮಿಳುನಾಡಿನ ಸೇಲಂನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರಮಟ್ಟದ ಸೇಲಂ ಓಪನ್ ಕರಾಟೆ ಚಾಂಪಿಯನ್ ಶಿಪ್ನಲ್ಲಿ ನಗರದ ನಿಧಿ ಬೇತೂರು 13 ವರ್ಷದೊಳಗಿನ ವಿಭಾಗದಲ್ಲಿ ಸ್ಪರ್ಧಿಸಿ ತೃತೀಯ ಸ್ಥಾನ ಗಳಿಸಿ ಕಂಚಿನ ಪದಕ ಪಡೆದಿದ್ದಾಳೆ.

ಗಾಯಗೊಂಡು ನರಳಾಡುತ್ತಿದ್ದ ಕೋತಿಗೆ ಚಿಕಿತ್ಸೆ ಕೊಡಿಸಿದ ಶಿಕ್ಷಕ ಗಿರೀಶ್
ಮಲೇಬೆನ್ನೂರು : ಗಾಯಗೊಂಡು ನರಾಳಾಡುತ್ತಿದ್ದ ಕೋತಿಯೊಂದನ್ನು ಕಂಡ ಶಿಕ್ಷಕ ಗಿರೀಶ್ ಗಂಟೇರ್ ಅವರು ತಕ್ಷಣ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಓಟಿಎಸ್ ಯೋಜನೆಯಲ್ಲಿ ಸಾಲ ಮರುಪಾವತಿಗಾಗಿ ರೈತರ ಒತ್ತಾಯ
ರಾಣೇಬೆನ್ನೂರು : ಓ ಟಿ ಎಸ್ ಯೋಜನೆಯಲ್ಲಿ ರೈತರ ಸಾಲದ ಹಣ ತುಂಬಿಸಿಕೊಳ್ಳುವಂತೆ ಒತ್ತಾಯಿಸಿ ಮಾಕನೂರ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಮೂಲಕ ಹಿರಿಯ ಅಧಿಕಾರಿಗಳಿಗೆ ರೈತ ಮುಖಂಡರುಗಳಾದ ರವೀಂದ್ರಗೌಡ ಪಾಟೀಲ ಹಾಗೂ ಈರಣ್ಣ ಹಲಗೇರಿ ಅವರುಗಳು ಮನವಿ ಸಲ್ಲಿಸಿದರು.

ಸರ್ವಜ್ಞ ಸಮುದಾಯ ಭವನ ಉದ್ಘಾಟಿಸಿದ ಎಸ್ಸೆಸ್
ಶಾಸಕ ಶಾಮನೂರು ಶಿವಶಂಕರಪ್ಪ ಅವರು ಕುಂಬಾರರ ಸಂಘದಿಂದ ನಿರ್ಮಿಸಿರುವ ಸರ್ವಜ್ಞ ಭವನ/ವಿದ್ಯಾರ್ಥಿ ನಿಲಯದ ಉದ್ಘಾಟನೆಯನ್ನು ನೆರವೇರಿಸಿದರು. ನಗರದ ಎಸ್.ಎಸ್. ಬಡಾವಣೆಯಲ್ಲಿ ಜಿಲ್ಲಾ ಕುಂಬಾರ ಸಂಘದಿಂದ ಭವನವನ್ನು ನಿರ್ಮಿಸಲಾಗಿದೆ.

ಹರಿಹರ: ವಿಶ್ವ ಕರವೇಗೆ ನೇಮಕ
ಹರಿಹರ : ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷರಾಗಿ ವಿ.ಕೆ. ಹರೀಶ್ ನೇಮಕಗೊಂಡಿದ್ದಾರೆ.

ಮಲೇಬೆನ್ನೂರು : ಎಸ್ಡಿಎಂಸಿ ಸದಸ್ಯರಿಗೆ ತರಬೇತಿ
ಮಲೇಬೆನ್ನೂರು : ಇಲ್ಲಿನ ಪಿಡಬ್ಲ್ಯೂಡಿ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ಡಿಎಂಸಿ ಸದಸ್ಯರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರವನ್ನು ಎಸ್ಡಿಎಂಸಿ ಅಧ್ಯಕ್ಷ ಬೆಣ್ಣೆಹಳ್ಳಿ ಬಸವರಾಜ್ ಉದ್ಘಾಟಿಸಿದರು.

ಶ್ರೀ ಸತ್ಯನಾರಾಯಣ ಪೂಜೆ, ನವಚಂಡಿಕಾ ಹೋಮ
ರಾಮ್ ಸೇನಾ ಕರ್ನಾಟಕ, ದಾವಣಗೆರೆ ಜಿಲ್ಲೆ ಇವರ ಆಶ್ರಯದಲ್ಲಿ ನಗರದ ಮೋತಿ ವೀರಪ್ಪ ಕಾಲೇಜು ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ನವಚಂಡಿಕಾ ಹೋಮ ಹಾಗೂ ಬೃಹತ್ ಧಾರ್ಮಿಕ ಸಭಾ ಕಾರ್ಯಕ್ರಮವು ಶನಿವಾರ ನೆರವೇರಿತು.

ಉಚ್ಚಂಗಿದುರ್ಗದಲ್ಲಿ ಭಾರತ ಹುಣ್ಣಿಮೆ: ಸರಳ ಆಚರಣೆ
ಹರಪನಹಳ್ಳಿ : ಮಧ್ಯ ಕರ್ನಾಟಕದ ಐತಿಹಾಸಿಕ ಪ್ರಸಿದ್ದ ಉಚ್ಚೆಂಗೆಮ್ಮ ದೇವಿ ಸನ್ನಿಧಿಯಲ್ಲಿ ಈ ಬಾರಿಯ ಭಾರತ ಹುಣ್ಣಿಮೆ ಆಚರಣೆಯನ್ನು ಸ್ಥಳೀಯರಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು.

ಟೇಬಲ್ ಟೆನ್ನಿಸ್ : ಎವಿಕೆ ವಿದ್ಯಾರ್ಥಿನಿಯರಿಗೆ ಪ್ರಥಮ ಸ್ಥಾನ
ದಾವಣಗೆರೆ ವಿಶ್ವವಿದ್ಯಾನಿಲಯದ ವಲಯ ಹಾಗೂ ಅಂತರ್ ಕಾಲೇಜು ಮಟ್ಟದ ಟೇಬಲ್ ಟೆನ್ನಿಸ್ ಕ್ರೀಡೆಯಲ್ಲಿ ಎ.ವಿ. ಕಮಲಮ್ಮ ಕಾಲೇಜು ಕ್ರೀಡಾಪಟುಗಳು ಭಾಗವಹಿಸಿ, ಪ್ರಥಮ ಸ್ಥಾನ ಗಳಿಸಿದ್ದಾರೆ.